| ಅಮಾಯಕ ಮನುಷ್ಯನೊಬ್ಬ ಹೇಗೋ ಒಂದು ಕೆಲಸವನ್ನು ಗಿಟ್ಟಿಸಿಕೊಂಡ ಅವನ ಕೆಲಸ ಹಳ್ಳಿಗಳಿಗೆ ಹೋಗಿ ಸಂಸ್ಥೆ ನೀಡಿದ್ದ ಸಾಲವನ್ನು ವಸೂಲಿ ಮಾಡುವುದಾಗಿತ್ತು , ಅವನ ಕೆಲಸ ಮಾಡುತ್ತಿದ್ದ ಸಂಸ್ಥೆಯು ಅವನ ಸೇವಾಧಿಯನ್ನು ಪರಿಗಣಿಸಿ ಅವನಿಗೆ ಸೇವಾವಧಿ ಬಡ್ತಿ ನೀಡುವುದರಲ್ಲಿತ್ತು ಮತ್ತು ಅವನಿಗೆ ಬಡ್ತಿ ನೀಡಲೇ ಬೇಕಿತ್ತು. ಆದರೆ ಅವನ ಮೇಲಾಧಿಕಾರಿಗಳು ಅವನ ಅವನ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಅವನ ಬಡ್ತಿಗಾಗಿ ಹಣದ ರೂಪವಾಗಿ ಲಂಚ ಕೇಳಲಾರಂಬಿಸಿದರು, ಆದರೆ ಅವನಲ್ಲಿ ಅವರು ಕೇಳಿದಷ್ಟು ಹಣವನ್ನು ಕೊಡಲು ಸಾಧ್ಯವಾಗಲಿಲ್ಲ ಆದರಿಂದ ಅವನ ಬಡ್ತಿಯನ್ನು ಮುಂದೂಡಿದರು. ಇದರಿಂದ ನೊಂದ ಆ ಅಮಾಯಕ ಅವರಿಗೆ ಪಾಠ ಕಲಿಸಬೇಕು ಎಂದು ಉದ್ದೇಶಿಸಿದ. ಅದರಂತೆ ಅವನು ಒಂದು ಉಪಾಯ ಮಾಡಿದ. ಅವನು ಕರಪತ್ರವನ್ನು ಮಾಡಿ ಹಳ್ಳಿಗಳಿಗೆ ತೆರಳಿ ಹಂಚತೊಡಗಿದ ಅದರಲ್ಲಿ ಮಾನ್ಯರೇ, ......... ಆದ ನಾನು ಹಲವು ವರ್ಷಗಳಿಂದ ತಮ್ಮ ಹಳ್ಳಿಗಳಲ್ಲಿ ಕೆಲಸ ನಿರ್ವಹಿಸಿದ್ದು ಈಗ ನನಗೆ ಸೇವಾವಧಿ ದೊರಕುದರಲ್ಲಿ ಇದೆ. ಬಡ್ತಗಾಗಿ ನಾನು ಮೇಲಾಧಿಕಾರಿಗಳೆಗೆ ಹಣವನ್ನು ನೀಡಬೇಕಾಗಿದೆ ಆದರೆ ಅವರು ಕೇಳಿದ ಹಣ ನನ್ನಲ್ಲಿ ಇರುವುದಿಲ್ಲ ಆದರಿಂದ ಸಹೃದಯಿಗಳಾದ ತಾವುಗಳು ತಮ್ಮಿಂದ ಸಾಧ್ಯವಾದಷ್ಟು ಹಣವನ್ನ ನೀಡಿ ನನ್ನ ಬಡ್ತಿಗೆ ಸಹಕರಿಸಬೇಕಾಗಿ ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಬರೆದಿತ್ತು. ಇದನ್ನ ನೋಡಿದ ಗ್ರಾಮದ ಪ್ರಮುಖರು ಆ ಅಧಿಕಾರಿಯ ಬಳಿ ಈ ಬಗ್ಗೆ ವಿಚಾರಿಸಿದರು ಇದರಿಂದ ತನ್ನ ತಪ್ಪನ ಅರಿವಾದ ಅಧಿಕಾರಿಯು ಆ ಅಮಾಯಕ ನೌಕರನ ಬಡ್ತಿಗೆ ಶಿಫಾರಸ್ಸು ಮಾಡಿದ. |
ಸೋಮವಾರ, ಫೆಬ್ರವರಿ 25, 2013
ಮೇಲಧಿಕಾರಿಗೆ ತಪ್ಪಿನ ಅರಿವು ಮೂಡಿಸಿದ ನೌಕರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)